ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಟೈಪ್ 2 ಮಧುಮೇಹದ ಹೆಚ್ಚಾಗುತ್ತದೆಯಂತೆ ಹಾಗಂತ ಈ ವಿಚಾರ ನಾವು ಹೇಳುತ್ತಿಲ್ಲ, ಇತ್ತೀಚೆಗೆ ಬ್ರಿಗ್ಯಾಮ್ ಯಂಗ್ ವಿಶ್ವವಿದ್ಯಾಲಯದ (BYU) ತಜ್ಞರು ನಡೆಸಿದ ಸಂಶೋಧನೆಯಲ್ಲಿ ಕಂಡು ಹಿಡಿಯಲಾಗಿದೆ!
ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ ಕೂಲ್ ಡ್ರಿಂಕ್ಸ್, ಸೋಡಾ ಹಾಗೂ ಎನರ್ಜಿ ಡ್ರಿಂಕ್ಸ್ ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡದೇ ಇದ್ದರೆ ಅಥವಾ ಮಿತಿ ಕಾಯ್ದು ಕೊಳ್ಳದೇ ಇದ್ದರೆ ಮುಂದೊಂದು ದಿನ ಇದಕ್ಕೆ ಹೆಚ್ಚಿನ ಬೆಲೆ ತೆರಬೇಕಾದೀತು! ಯಾಕೆಂದ್ರೆ ಈ ಪಾನೀಯಗಳನ್ನು ಅತಿಯಾಗಿ ಕುಡಿಯುವುದರಿಂದ ಕೂಡ ಮಧುಮೇಹ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆಯಂತೆ! ಇನ್ನೂ ಆತಂಕದ ವಿಚಾರ ಏನೆಂದರೆ ಹಣ್ಣಿನ ರಸ ಕುಡಿಯುವುದರಿಂದಲೂ ಕೂಡ ಟೈಪ್ 2 ಮಧುಮೇಹ ಬರುವ ಅಪಾಯ ಹೆಚ್ಚಿರುತ್ತದೆ ಎಂದು ಬ್ರಿಗ್ಯಾಮ್ ಯಂಗ್ ವಿಶ್ವವಿದ್ಯಾಲಯದ (BYU) ಸಂಶೋಧಕರು ತಮ್ಮಅಧ್ಯಾಯನದ ವರದಿಯಲ್ಲಿ ತಿಳಿಸಿದ್ದಾರೆ
ಹಣ್ಣಿನ ಜ್ಯೂಸ್ ಮಾಡಿ ಕುಡಿಯುವ ಬದಲು, ಹಾಗೆಯೇ ಇಡೀ ಹಣ್ಣು ಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.ಈ ರೀತಿ ಸೇವನೆ ಮಾಡುವುದ ರಿಂದ ಮಧುಮೇಹ ಕಾಣಿಸಿಕೊಳ್ಳುವ ಅಪಾಯ ತುಂಬಾನೇ ಕಡಿಮೆ ಇರುತ್ತದೆ ಎನ್ನುತ್ತಾರೆ ತಜ್ಞರು.
ಇನ್ನುಇಡೀ ಹಣ್ಣುಗಳು,ಧಾನ್ಯಗಳು ಅಥವಾ ಡೈರಿ ಉತ್ಪನ್ನಗಳಲ್ಲಿ ಕಂಡು ಬರುವ ಸಕ್ಕರೆಯಾಂಶವು ಆರೋಗ್ಯಕ್ಕೆ ಅಷ್ಟೊಂದು ಅಪಾಯಕಾರಿ ಯಲ್ಲ ಎನ್ನುತ್ತದೆ ಸಂಶೋಧನೆ.ಅದೇ ರೀತಿ, ಫೈಬರ್ ಅಂದರೆ ನಾರಿನಾಂಶ, ಪ್ರೋಟೀನ್ ಮತ್ತು ಇತರ ಪೋಷಕಾಂಶ ಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳು ಕೂಡ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
ಮಧುಮೇಹ ರೋಗಿಗಳಿಗೆ ಹಾಗಲಕಾಯಿ ಮತ್ತು ಹಸಿರೆಲೆ ತರಕಾರಿ ಗಳು ತುಂಬಾನೇ ಪ್ರಯೋಜನಕಾರಿ. ಆದರೆ ಹಣ್ಣಿನ ಜ್ಯೂಸ್, ಕೂಲ್ ಡ್ರಿಂಕ್ಸ್, ಸೋಡಾ ಹಾಗೂ ಎನರ್ಜಿ ಡ್ರಿಂಕ್ಸ್ ನಂತಹ ಪಾನೀಯ ಗಳನ್ನು ಸೇವನೆ ಮಾಡುವುದರಿಂದ ಮಧುಮೇಹ ಕಾಯಿಲೆ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆಯಂತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ