ಸೋಮವಾರ, ಜೂನ್ 16, 2025

ಚಿಕನ್ ಬೋಂಡ - Chicken Bonda

 



ಬೇಕಾಗುವ ಸಾಮಗ್ರಿಗಳು

ಚಿಕನ್ ಬೋನ್‌ಲೆಸ್ – ೫೦೦ ಗ್ರಾಂ ,ಮೊಟ್ಟೆ – ೧,ಕಾರ್ನ್‌ಫ್ಲೋರ್ – ೧೦೦ ಗ್ರಾಂ, ಅಚ್ಚಖಾರದಪುಡಿ – ೨ ಚಮಚ, ಗರಂ ಮಸಾಲ – ೧ ಚಮಚ, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – ೨ ಚಮಚ,ಓಂ ಕಾಳು – ೧ 



ಚಮಚ, ಅಡುಗೆ ಸೋಡ – ಅರ್ಧ ಚಮಚ,ಎಣ್ಣೆ – ೧ ಲೀಟರ್, ಕಡಲೆಹಿಟ್ಟು – ಕಾಲು ಕೆಜಿ, ನೀರು – ೧೫೦ ಮಿ. ಲೀ.,ಉಪ್ಪು – ರುಚಿಗೆ ತಕ್ಕಷ್ಟು,




ಮಾಡುವ ವಿಧಾನ:

ಬೌಲ್‌ಗೆ ಬೋನ್‌ಲೆಸ್ ಚಿಕನ್‌ನನ್ನು ಸಣ್ಣ ತುಂಡುಗಳಾಗಿ ಮಾಡಿಕೊಂಡು ಅದರ ಜೊತೆ ಮೊಟ್ಟೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕಾರ್ನ್‌ಫ್ಲೋರ್, ಅಚ್ಚಖಾರದಪುಡಿ, ಗರಂ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿಕೊಳ್ಳಿ. ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾದ ಮೇಲೆ ಈ ಮಿಶ್ರಣವನ್ನು ಶ್ಯಾಲೋ ಫ್ರೈ ಮಾಡಿಕೊಳ್ಳಿ. ಇನ್ನೊಂದು ಬೌಲ್‌ನಲ್ಲಿ ಕಡಲೆಹಿಟ್ಟು, ಅಡುಗೆ ಸೋಡ, ಉಪ್ಪು, ಓಂಕಾಳು ಮತ್ತು ನೀರುಹಾಕಿ ಬೋಂಡಾಹಿಟ್ಟಿನ

ಹದಕ್ಕೆ ಕಲಸಿಕೊಳ್ಳಿ. ಶ್ಯಾಲೋ ಫ್ರೈ ಮಾಡಿದ ಚಿಕನ್ ಅನ್ನು ಕಲೆಸಿಟ್ಟ

ಹಿಟ್ಟಿನಲ್ಲಿ ಅದ್ದಿ, ಕಾದಎಣ್ಣೆಯಲ್ಲಿ ಕರಿಯಿರಿ. ಈಗ ಸ್ವಾದಿಷ್ಟ ಚಿಕನ್

ಬೋಂಡ ರೆಡಿ.

ಬೊಜ್ಜು ಪ್ರೇರಿತ ಆಸ್ತಮಾ