ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಬಾಳ ಬೆಳಕು ಬೆಳಗಲೆಂದು, ಸೃಷ್ಟಿಸೊಬಗ ನೋಡಲೆಂದು
ಬಾಳ ಬೆಳಕು ಬೆಳಗಲೆಂದು, ಸೃಷ್ಟಿಸೊಬಗ ನೋಡಲೆಂದು
ತಾಯಿ ಮಡಿಲ ತುಂಬಿಬಂದ, ದೇವದೇವರೆ ಜೋ ಜೋಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಬುವಿಯ ಸ್ವರ್ಗ ಮಾಡಲೆಂದು, ಇಳೆಗೆ ಇಳಿದು ಬಂದು ಇಂದು
ಬುವಿಯ ಸ್ವರ್ಗ ಮಾಡಲೆಂದು, ಇಳೆಗೆ ಇಳಿದು ಬಂದು ಇಂದು
ನನ್ನ ಧನ್ಯಳಾಗಿ ಮಾಡಿದ, ಲೋಕಪಾಲರೆ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ವನಮಾಲಿ ಕೇಶವನೆ, ಘನಶೂಲಿ ಸದಾಶಿವನೆ
ವನಮಾಲಿ ಕೇಶವನೆ, ಘನಶೂಲಿ ಸದಾಶಿವನೆ
ಕಮಲಾಸನ ವಾಗೀಶನೆ, ತ್ರಿಮೂರ್ತಿಗಳೆ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಪರಮಪುರುಷ ಪರಬ್ರಹ್ಮ ಪರಮೇಶ್ವರ ಜೋ ಜೋ
ಆದಿದೇವ ಆದಿಮೂಲ ಆದಿಬ್ರಹ್ಮ ಜೋ ಜೋ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ