ಗುರುವಾರ, ಜುಲೈ 30, 2026

ಗುಲಾಬ್ ಜಾಮೂನ್ ಬರ್ಫಿ

 



ಗುಲಾಬ್ ಜಾಮೂನ್ ಬರ್ಫಿ

ಬೇಕಾಗುವ ಸಾಮಗ್ರಿಗಳು 

ಗುಲಾಬ್ ಜಾಮೂನ್  ಹಿಟ್ಟು  - 1 ಕಪ್ 

ಸಕ್ಕರೆ - 1 ಕಪ್ 

ನೀರು - ಅರ್ಧ ಕಪ್ 

ತುಪ್ಪ - 3 ದೊಡ್ಡ ಚಮಚ 

ಹಾಲು - ಅರ್ಧ ಕಪ್ 

ಏಲಕ್ಕಿ ಪುಡಿ - ಸ್ವಲ್ಪ 

ಮಾಡುವ ವಿಧಾನ 

ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ಜಾಮೂನ್ ಮಿಕ್ಸ್ ಸೇರಿಸಿ ಕಡಿಮೆ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. 

ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರು ಹಾಕಿ ಪಾಕ ತಯಾರಿಸಿ. 

ಹುರಿದ ಹಿಟ್ಟಿಗೆ ಹಾಲು ಮತ್ತು ಸಕ್ಕರೆ ಪಾಕ ಸೇರಿಸಿ ಗಂಟಿಲ್ಲದಂತೆ ಕೈಯಾಡಿಸಿ. 

ಮಿಶ್ರಣವು ಗಟ್ಟಿಯಾಗಿ ಬಾಣಲೆ ಬಿಟ್ಟು ಬರುವವರೆಗೆ ಸಣ್ಣ ಉರಿಯಲ್ಲಿ ಸತತವಾಗಿ ತಿರುಗಿಸಿ. 

ತಟ್ಟೆಗೆ ತುಪ್ಪ ಸವರಿ, ತಯಾರಾದ ಮಿಶ್ರಣವನ್ನು ಹಾಕಿ ಸಮವಾಗಿ ಹರಡಿ ಆರಿಸಿಕೊಳ್ಳಿ. 

ಸಂಪೂರ್ಣ ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ತುಂಡರಿಸಿ. 


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ