ಬೇಗ ಬಾರೋ ಬೇಗ ಬಾರೋ : Bega Baro Bega Baro
ಬೇಗ ಬಾರೋ ಬೇಗ ಬಾರೋ
ಕೀರ್ತನಕಾರರು : ವಾದಿರಾಜರು
ರಾಗ : ಮಧ್ಯಮಾವತಿ
ತಾಳ : ಆದಿ
ಬೇಗ ಬಾರೋ ಬೇಗ ಬಾರೋ ನೀಲಮೇಘ ವರ್ಣ ।।ಪ।।
ಬೇಗ ಬಾರೋ ಬೇಗ ಬಾರೋ ವೇಲಾಪುರದ ಚೆನ್ನ ।।ಅ. ಪ।।
ಇಂದಿರಾರಮಣ ಗೋವಿಂದ ಬೇಗ ಬಾರೋ
ನಂದನ ಕಂದ ಮುಕುಂದ ಬೇಗ ಬಾರೋ ।।೧।।
ಋದ್ಧ ಸಮೃದ್ಧ ಅನಿರುದ್ಧ ಬೇಗ ಬಾರೋ
ಹದ್ದನೇರಿದ ಪ್ರಸಿದ್ಧ ಬೇಗ ಬಾರೋ ।।೨।।
ರಂಗ ಉತ್ತುಂಗ ನರಸಿಂಹ ಬೇಗ ಬಾರೋ
ಕಂಗಳಿಗೆಸೆವ ಶುಭಾಂಗ ಬೇಗ ಬಾರೋ ।।೩।।
ಧೀರ ಉದಾರ ಗಂಭೀರ ಬೇಗ ಬಾರೋ
ಹಾರಾಲಂಕಾರ ರಘುವೀರ ಬೇಗ ಬಾರೋ ।।೪।।
ಅಯ್ಯ ವಿಜಯ್ಯ ಸಾಹಯ್ಯ ಬೇಗ ಬಾರೋ
ದಯಾದ್ರಿವಾಸ ಹಯವದನ ಬೇಗ ಬಾರೋ ।।೫।।
bega baro bega baro nila meghavarna baro
bega baro belapurada chenna ||
indireramana govinda bega baro
nandanakanda mukunda bega baro||1||
dhira udara gambhira bega baro
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ