Kannada Devotional Songs ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Kannada Devotional Songs ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 1, 2026

ಎಂದೆಂದಿಗು ಬಾಡದ - Vidyabhushana

 





ಎಂದೆಂದಿಗು ಬಾಡದ ಅರವಿಂದದ ಮಾಲೆಯ

ಇಂದಿರೆ ಪೊಳೆವ ಕೊರಳಲ್ಲಿ

ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-

ಳಿಂದು ವಧೂವರರ ಸಲಹಲಿ ||೧೩|| |ಶೋಭಾನೆ||


ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ

ಭಾಮೆ ಮಹಲಕ್ಷುಮಿ ಧರಿಸಿದಳೆ

ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ

ಸೇವಕ ಜನರ ಸಲಹಲಿ ||೧೪||  |ಶೋಭಾನೆ||


Endendigu bāḍada aravindada māleya

indire poḷeva koraḷalli

indire poḷeva koraḷalli dharisidaḷe ava-

ḷindu vadhūvarara salahali ||13|| |śōbhāne||


dēvāṅga paṭṭeya melu hoddikeya

bhāme mahalakṣumi dharisidaḷe

bhāme mahalakṣumi dharisidaḷā devi tanna

sēvaka janara salahali ||14||  |śōbhāne||


The garland of Arvind that never fades

On the neck of the burning ones

On the neck of the burning ones

She wears the advice of the bride and groom ||13||  |Shobhaane||


The goddess wears the beautiful Mahalakshmi, the beautiful goddess wears the advice of her


servants ||14||  |Shobhaane||



ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ

ಪಕ್ಷಿವಾಹನ್ನಗೆರಗುವೆ

ಪಕ್ಷಿವಾಹನ್ನಗೆರಗುವೆ ಅನುದಿನ

ರಕ್ಷಿಸಲಿ ನಮ್ಮ ವಧೂವರರ ||೧||


ಪಾಲಸಾಗರವನ್ನು ಲೀಲೆಯಲಿ ಕಡೆಯಲು

ಬಾಲೆ ಮಹಾಲಕ್ಷುಮಿ ಉದಿಸಿದಳು

ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ

ಪಾಲಿಸಲಿ ನಮ್ಮ ವಧೂವರರ ||೨||


ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ

ಸುಮ್ಮನೆಯಾಗಿ ಮಲಗಿಪ್ಪ

ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು

ಜನ್ಮವೆಂಬುದು ಅವತಾರ ||೩||


ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ

ಅಂಬುಜವೆರಡು ಕರಯುಗದಿ

ಅಂಬುಜವೆರಡು ಕರಯುಗದಿ ಧರಿಸಿ

ಪೀತಾಂಬರವನುಟ್ಟು ಮೆರೆದಳೆ ||೪||


ಒಂದು ಕರದಿಂದ ಅಭಯವನೀವಳೆ

ಮತ್ತೊಂದು ಕೈಯಿಂದ ವರಗಳ

ಕುಂದಿಲ್ಲಲದಾನಂದಸಂದೋಹ ಉಣಿಸುವ

ಇಂದಿರೆ ನಮ್ಮ ಸಲಹಲಿ ||೫||


ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು

ನಲಿವ ಕಾಲಂದುಗೆ ಘಲಕೆನಲು

ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ

ಸಲಹಲಿ ನಮ್ಮ ವಧೂವರರ ||೬||


ರನ್ನದ ಮೊಲೆಗಟ್ಟು ಚಿನ್ನದಾಭರಣಗಳ

ಚೆನ್ನೆ ಮಹಲಕ್ಷುಮಿ ಧರಿಸಿದಳೆ

ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ

ತನ್ನ ಮನೆಯ ವಧೂ-ವರರ ಸಲಹಲಿ ||೭||


ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು

ತುಂಬಿಗುರುಳ ಮುಖಕಮಲ

ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ

ದಂಬೆ ವಧೂವರರ ಸಲಹಲಿ ||೮||


ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ

ಕಸ್ತೂರಿ ತಿಲಕ ಧರಿಸಿದಳೆ

ಕಸ್ತೂರಿ ತಿಲಕ ಧರಿಸಿದಳಾ ದೇವಿ

ಸರ್ವತ್ರ ವಧೂವರರ ಸಲಹಲಿ ||೯||


ಅಂಬುಜನಯನಗಳ ಬಿಂಬಾಧರದ ಶಶಿ-

ಬಿಂಬದಂತೆಸೆವ ಮೂಗುತಿಮಣಿಯ ಶಶಿ-

ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ

ಉಂಬುದಕೀಯಲಿ ವಧುವರರ್ಗೆ ||೧೦||


ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ

ನೆತ್ತಿಯ ಮೇಲೆ ಧರಿಸಿದೆಳೆ

ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ

ಭಕ್ತಿಯ ಜನರ ಸಲಹಲಿ ||೧೧||


ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ

ಚೆಂದದ ತುರುಬಿಗೆ ತುರುಬಿದಳೆ

ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ-

ಯಿಂದ ವಧೂವರರ ಸಲಹಲಿ ||೧೨||


ಎಂದೆಂದಿಗು ಬಾಡದ ಅರವಿಂದದ ಮಾಲೆಯ

ಇಂದಿರೆ ಪೊಳೆವ ಕೊರಳಲ್ಲಿ

ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-

ಳಿಂದು ವಧೂವರರ ಸಲಹಲಿ ||೧೩||


ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ

ಭಾಮೆ ಮಹಲಕ್ಷುಮಿ ಧರಿಸಿದಳೆ

ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ

ಸೇವಕ ಜನರ ಸಲಹಲಿ ||೧೪||


ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು

ಲೋಲಾಕ್ಷಿ ಮೆಲ್ಲನೆ ನಡೆತಂದಳು

ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು

ಆಲೋಚಿಸಿದಳು ಮನದಲ್ಲಿ ||೧೫||


ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ

ಮನ್ನದಿ ನಾಚಿ ಮಹಲಕ್ಷುಮಿ

ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ

ಉನ್ನತ ದೋಷಗಳನೆಣಿಸಿದಳು ||೧೬||


ಕೆಲವರು ತಲೆಯೂರಿ ತಪಗೈದು ಪುಣ್ಯವ

ಗಳಿಸಿದ್ದರೇನೂ ಫಲವಿಲ್ಲ

ಜ್ವಲಿಸುವ ಕೋಪದಿ ಶಾಪವ ಕೊಡುವರು

ಲಲನೆಯನಿವರು ಒಲಿಸುವರೆ ||೧೭||


ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ

ಕಲ್ಲಿಸಿ ಕೊಡುವ ಗುರುಗಳು

ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು

ಸಲ್ಲದ ಪುರೋಹಿತಕ್ಕೊಳಗಾದರು ||೧೮||


ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ

ಭಾಮಿನಿಯ ಹಿಂದೆ ಹಾರಿದವ

ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ

ಕಾಮದಿ ಗುರುತಲ್ಪಗಾಮಿಯೊಬ್ಬ ||೧೯||


ನಶ್ವರೈಶ್ವರ್ಯವ ಬಯಸುವನೊಬ್ಬ ಪರ-

ರಾಶ್ರಯಿಸಿ ಬಾಳುವ ಈಶ್ವರನೊಬ್ಬ

ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ

ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦||


ಮಾವನ ಕೊಂದೊಬ್ಬ ಮರುಳಾಗಿಹನು

ಗಾಢ ಹಾರ್ವನ ಕೊಂದೊಬ್ಬ ಬಳಲಿದ

ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ

ಶಿವನಿಂದೊಬ್ಬ ಬಯಲಾದ ||೨೧||


ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ

ಅಮ್ಮಮ್ಮ ತಕ್ಕ ಗುಣವಿಲ್ಲ

ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ

ಮರ್ಮವ ಮೆಟ್ಟಿ ಕೊಲಿಸುವ ||೨೨||


ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ

ಬಲ್ಲಿದಗಂಜಿ ಬರಿಗೈದ

ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-

ತಾಳಕ್ಕೆ ಇಳಿದ ಗಡ ||೨೩||


ಎಲ್ಲರಾಯುಷ್ಯವ ಶಿಂಶುಮಾರದೇವ

ಸಲ್ಲೀಲೆಯಿಂದಲಿ ತೊಲಗಿಸುವ

ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು

ಬಲ್ಲವರೆನ್ನ ಭಜಿಸುವರು ||೨೪||


ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ

ವಿಕೃತಿಗೊಳಾಗಿ ಭವದಲ್ಲಿ

ಸುಖದುಃಖವೆಂಬ ಬೊಮ್ಮಾದಿ ಜೀವರು

ದುಃಖಕ್ಕೆ ದೂರೆನಿಪ ಎನಗೆಣೆಯ ||೨೫||


ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ

ಒಬ್ಬನಾವನಿಗೆ ಶಯನಾಹ

ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ

ಅಬ್ಬರದಲಾವಾಗ ಸುಳಿವರು ||೨೬||


ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ

ಸರ್ವರಿಗಾವ ಅಮೃತವ

ಸರ್ವರಿಗಾವ ಅಮೃತವನುಣಿಸುವ ಅವ-

ನೊಬ್ಬನೆ ನಿರನಿಷ್ಟ ನಿರವದ್ಯ ||೨೭||


ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ

ಒರೆದು ನೋಡಲು ನರಹರಿಗೆ

ನರಕಯಾತನೆ ಸಲ್ಲ ದುರಿತಾತಿದೂರನಿಗೆ

ಮರುಳ ಮನಬಂದಂತೆ ನುಡಿಯದಿರು ||೨೮||


ಒಂದೊಂದು ಗುಣಗಳು ಇದ್ದಾವು ಇವರಲ್ಲಿ

ಸಂದಣಿಸಿವೆ ಬಹು ದೋಷ

ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು

ಇಂದಿರೆ ಪತಿಯ ನೆನೆದಳು ||೨೯||


ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು

ತೀವಿದ್ದ ಹರಿಗೆ ದುರಿತವ

ಭಾವಜ್ನರೆಂಬರೆ ಆಲದೆಲೆಯ ಮೆಲೆ

ಶಿವನ ಲಿಂಗವ ನಿಲಿಸುವರೆ ||೩೦||


ಹಸಿ-ತೃಷೆ-ಜರೆ-ಮರಣ-ರೋಗ-ರುಜೆಗಳೆಂಬ

ಅಸುರ-ಪಿಶಾಚಿಗಳೆಂಬ ಭಯವೆಂಬ

ವ್ಯಸನ ಬರಬಾರದು ಎಂಬ ನಾರಾಯಣಗೆ

ಪಶು ಮೊದಲಾಗಿ ನೆನೆಯದು ||೩೧||


ತಾ ದುಃಖಿಯಾದರೆ ಸುರರಾರ್ತಿಯ ಕಳೆದು

ಮೋದವೀವುದಕ್ಕೆ ಧರೆಗಾಗಿ

ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ

ಭಾಧಿಪ ಕೆಸರ ಬಿಡಿಸುವನೆ ||೩೨||


ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ

ಜನ್ಮಲಯವಿದವನಿಗೆ

ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ

ಅಮ್ಮ ಇವಗೆ ಹಸಿ-ತೃಷೆಯುಂಟೆ ||೩೩||


ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ

ಯೋಗಿಗೆ ಉಂಟೆ ಧನಧಾನ್ಯ

ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ

ಮತ್ತಾಗಲೆಲ್ಲಿಹುದು ವಿಚಾರಿಸಿರೊ ||೩೪||


ರೋಗವನೀವ ವಾತ ಪಿತ್ತ ಶ್ಲೇಷ್ಮ

ಆಗ ಕೂಡುವುದೆ ರಮೆಯೊಡನೆ

ಭೋಗಿಸುವವಗೆ ದುರಿತವ ನೆನೆವರೆ

ಈ ಗುಣನಿಧಿಗೆ ಎಣೆಯುಂಟೆ ||೩೫||


ರಮ್ಮೆದೇವಿಯರನಪ್ಪಿಕೊಂಡಿಪ್ಪುದು

ರಮ್ಮೆಯರಸಗೆ ರತಿ ಕಾಣಿರೊ

ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ

ಕುಮ್ಮಾರರ್ ಯಾಕೆ ಜನಿಸರು ||೩೬||


ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ

ಬೇಕೆಂಬ ನ್ಯಾಯವ ತಿಳಿದುಕೊ

ಶ್ರೀಕೃಷ್ಣನೊಬ್ಬನೆ ಸರ್ವ ದೋಷಕ್ಕೆ ಸಿ

ಲುಕನೆಂಬುದು ಸಲಹಲಿಕೆ ||೩೭||


ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ

ಸಲ್ಲದು ರೋಗ ರುಜಿನವು

ಬಲ್ಲ ವೈದ್ಯರ ಕೆಳಿ ಅಜೀರ್ತಿಮೂಲವೆಲ್ಲ

ಸಲ್ಲದು ರೋಗ ರುಜಿನವು ||೩೮||


ಇಂಥಾ ಮೂರುತಿಯ ಒಳಗೊಂಬ ನರಕ ಬಹು

ಭ್ರಾಂತ ನೀನೆಲ್ಲಿಂದ ತೋರಿಸುವೆಲೊ

ಸಂತೆಯ ಮರುಳ ಹೋಗೆಲೊ ನಿನ್ನ ಮಾತ

ಸಂತರು ಕೇಳಿ ಸೊಗಸರು ||೩೯||


ಶ್ರೀನಾರಾಯಣರ ಜನನೀ ಜನಕರ

ನಾನೆಂಬ ವಾದೀ ನುಡಿಯಲೊ

ಜಾಣರಿಂದರಿಯ ಮೂಲ ರೂಪವ ತೊರಿ

ಶ್ರೀ ನರಸಿಂಹನ ಅವತಾರ ||೪೦||


ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ

ನೆಂಬ ಶ್ರೀ ಹರಿಯ ಪಿತನಾರು?

ಎಂಬ ಶ್ರೀ ಹರಿಯ ಪಿತನಾರು ಅದರಿಂದ ಸ್ವಾ

ಯಂಭುಗಳೆಲ್ಲ ಅವತಾರ ||೪೧||


ದೇವಕಿಯ ಗರ್ಭದಲಿ ದೇವನವತರಿಸಿದ

ಭಾವವನ್ನು ಬಲ್ಲ ವಿವೇಕಿಗಳು

ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ-

ಆವ ಪರಿಯಲ್ಲಿ ನುಡಿಯುವಿಯೊ ||೪೨||


ಆಕಳಿಸುವಾಗ ಯಶೋದಾದೇವಿಗ

ದೇವ ತನ್ನೊಳಗೆ ಹುದುಗಿದ್ದ

ತ್ರಿಭುವನವೆಲ್ಲವ ತೋರಿದುದಿಲ್ಲವೆ

ಆ ವಿಷ್ಣು ಗರ್ಭದೊಳಡಗುವನೆ ||೪೩||


ಆನೆಯ ಮಾನದಲ್ಲಿ ಅಡಗಿಸಿದವರುಂಟೆ

ಅನೇಕ ಕೋಟಿ ಅಜಾಂಡವ

ಅಣುರೇಣು ಕೂಪದಲಿ ಆಳ್ದ ಶ್ರೀ ಹರಿಯ

ಜನನಿ ಜಠರವು ಒಳಗೊಂಬುದೆ ||೪೪||


ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ

ಮದನನಿವನ ಕುಮಾರನು

ಕದನದಿ ಕಣೆಗಳ ಇವನೆದೆಗೆಸೆವನೆ

ಸುದತೇರಿವನಿಂತು ನಿಂತು ಸಿಲುಕುವನೆ ||೪೫||


ಅದರಿಂದ ಕೃಷ್ಣನಿಗೆ ಪರನಾರೀ ಸಂಗವ ಕೋ-

ವಿದರಾದ ಬುಧರು ನುಡಿವರೆ

ಸದರವೆ ಈ ಮಾತು ಸರ್ವ ವೇದಂಗಳು

ಮುದದಿಂದ ತಾವು ಸ್ತುತಿಸುವವು ||೪೬||


ಎಂದ ಭಾಗವತದ ಚೆಂದದ ಮಾತನು

ಮಂದ ಮಾನವ ಮನಸಿಗೆ

ತಂದುಕೊ ಜಗಕ್ಕೆ ಕೈವಲ್ಯವೀವ ಮು-

ಕುಂದಗೆ ಕುಂದು ಕೊರತೆ ಸಲ್ಲದು ||೪೭||


ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ

ಚಿತ್ತ ಸ್ತ್ರೀಯರಿಗೆ ಎರಗುವದೆ

ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ

ಸತ್ಯಸಂಕಲ್ಪ ಬೆರಸಿದ್ದ ||೪೮||


ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ

ಹತ್ತು ಹತ್ತೆನಿಪ ಕ್ರಮದಿಂದ

ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ

ಅರ್ತಿಯ ಸೃಷ್ಟಿ ಹರಿಗಿದು ||೪೯||


ರೋಮ-ರೋಮಕೂಪ ಕೋಟಿವೃಕಂಗಳ

ನಿರ್ಮಿಸಿ ಗೋಪಾಲರ ತೆರಳಿಸಿದ

ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ

ಮಹಿಮೆ ಬಲ್ಲವರಿಗೆ ಸಲಹಲಿಕೆ ||೫೦||


ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ

ಸಣ್ಣ ಬಾಯೊಳಗೆ ಜಗಂಗಳ

ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ

ಘನತೆ ಬಲ್ಲವರಿಗೆ ಸಲಹಲಿಕೆ ||೫೧||


ನಾರದ ಸನಕಾದಿಮೊದಲಾದ ಯೋಗಿಗಳು

ನಾರಿಯರಿಗೆ ಮರುಳಾಹರೆ

ಓರಂತೆ ಶ್ರೀಕೃಷ್ಣನಡಿಗೆರಗುವರೆ

ಆರಾಧಿಸುತ್ತ ಭಜಿಸುವರೆ ||೫೨||


ಅಂಬುಜಸಂಭವ ತ್ರಿಯಂಬಕ ಮೊದಲಾದ

ನಂಬಿದವರಿಗೆ ವರವಿತ್ತ

ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ

ಇಂಬಿದ್ದರಿವನ ಭಜಿಸುವರೆ ||೫೩||


ಅವನಂಗುಷ್ಠವ ತೊಳೆದ ಗಂಗಾದೇವಿ

ಪಾವನಳೆನಿಸಿ ಮೆರೆಯಳೆ

ಜೀವನ ಸೇರುವ ಪಾಪವ ಕಳೆವಳು

ಈ ವಾಸುದೇವಗೆ ಎಣೆಯುಂಟೆ ||೫೪||


ಕಿಲ್ಬಿಷವಿದ್ದರೆ ಅಗ್ರ ಪೂಜೆಯನು

ಸರ್ವರಾಯರ ಸಭೆಯೊಳಗೆ

ಉಬ್ಬಿದ ಮನದಿಂದ ಧರ್ಮಜ ಮಾಡುವನೆಲೆ

ಕೊಬ್ಬದಿರೆಲೊ ಪರವಾದಿ ||೫೫||


ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ

ಜೀವಂತರಿಗೆ ನರಕದಲ್ಲಿ

ನೋವನೀವನು ನಿಮ್ಮ ಯಮದೇವನು

ನೋವ ನೀ ಹರಿಯ ಗುಣವರಿಯ ||೫೬||

******* 


 ಶೋಭನವೆನ್ನಿರೆ ಸುರರೊಳು ಸುಭಗನಿಗೆ 

 ಶೋಭನವೆನ್ನೀ ಸುಗುಣನಿಗೆ । 

 ಶೋಭನವೆನ್ನಿರೆ ತ್ರಿವಿಕ್ರಮರಾಯನಿಗೆ 

 ಶೋಭನವೆನ್ನೀ ಸುರಪ್ರಿಯಗೆ ॥ ಶೋಭಾನೆ ॥  ॥ಪಲ್ಲವಿ॥ 



video is from youtube - Naada Ninaadam

ಶ್ರೀ ವಾದಿರಾಜ ಗುರುಸಾರ್ವಭೌಮರು ರಚಿಸಿದ "ಶ್ರೀ ಲಕ್ಷ್ಮೀ ಶೋಭನ ಪದ"ವನ್ನು ಪಾರಂಪರಿಕವಾಗಿ ಹಾಡುವ ಶೈಲಿಯಲ್ಲಿ ಪ್ರಸ್ತುತಪಡಿಸುವ ವಿನಮ್ರ ಪ್ರಯತ್ನವಿದು.

ಶ್ರೀ ಲಕ್ಷ್ಮೀನಾರಾಯಣರು ಇದನ್ನು ಹಾಡಿದವರಿಗೂ, ಕೇಳುಗರಿಗೂ ಸರ್ವಾಭೀಷ್ಟವನ್ನು ಕರುಣಿಸಲಿ ಎಂದು ಹಾರೈಸುತ್ತೇವೆ.



part two


ನರಕವಾಳುವ ಯಮಧರ್ಮರಾಯ

ತನ್ನ ನರಜನ್ಮದೊಳಗೆ ಪೊರಳಿಸಿ

ಮರಳೀ ತನ್ನರಕದಲಿ ಪೊರಳಿಸಿ ಕೊಲುವನು

ಕುರು ನಿನ್ನ ಕುಹಕ ಕೊಳದಲ್ಲ ||೫೭||


ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ

ಸುಮ್ಮನೆಯಾಗಿ ಮಲಗಿಪ್ಪ

ನಮ್ಮ ನಾರಾಯಣಗೆ ಹಸಿ-ತೃಷೆ -ಜರ-ಮರಣ-ದು-

ಷ್ಕರ್ಮ-ದುಃಖಂಗಳು ತೊಡಸುವರೆ ||೫೮||


ರಕ್ಕಸರಸ್ತ್ರಗಳಿಂದ ಗಾಯವಡೆಯದ

ಅಕ್ಷಯಕಾಯದ ಶ್ರೀಕೃಷ್ಣ

ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ

ಹುಚ್ಚ ನೀ ಹರಿಯ ಗುಣವರಿಯ ||೫೯||


ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು

ತುಚ್ಛ ನರಕದೊಳು ಅನಲನಿಗೆ

ಬೆಚ್ಚುವನಲ್ಲ ಅದರಿಂದವಗೆ ನರಕ

ಮೆಚ್ಚುವರಲ್ಲ ಬುಧರೆಲ್ಲ ||೬೦||


ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ

ರಣರಂಗದಲಿ ಕ್ಷಮಿಸುವನೆ

ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ

ಮುನಿವ ಕಾಲಕ್ಕೆ ಮಹತ್ತಾಹ ||೬೧||


ತಾಯ ಪೊಟ್ಟೆಯಿಂದ ಮೂಲರೂಪವ ತೋರಿ

ಆಯುಧ ಸಹಿತ ಪೊರವಂಟ

ನ್ಯಾಯಕೋವಿದರು ಪುಟ್ಟಿದನೆಂಬರೆ

ಬಾಯಿಗೆ ಬಂದಂತೆ ಬೊಗಳದಿರು ||೬೨||


ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು

ಇಟ್ಟ ನವರತ್ನದ ಕಿರೀಟವು

ಮೆಟ್ಟಿದ ಕುರುಹು ಎದೆಯಲ್ಲಿ ತೊರಿದ ಶ್ರೀ-

ವಿಠ್ಠಲ ಪುಟ್ಟಿದನೆನಬಹುದೆ ||೬೩||


ವೃಷಭಹಂಸಮೂಷಕವಾಹನವೇರಿ ಮಾ-

ನಿಸರಂತೆ ಸುಳಿವ ಸುರರೆಲ್ಲ

ಎಸೆವ ದೇವೇಶಾನರ ಸಾಹಸಕ್ಕೆ ಮಡಿದರು

ಕುಸುಮನಾಭನಿಗೆ ಸರಿಯುಂಟೆ ||೬೪||


ಒಂದೊಂದು ಗುಣಗಳು ಇದ್ದಾವು ಇವರಲ್ಲಿ

ಸಂದೆಣಿಸಿವೆ ಬಹು ದೋಷ

ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು

ಇಂದಿರೆ ಪತಿಯ ನೆನೆದಳು ||೬೫||


ಇಂತು ಚಿಂತಿಸಿ ರಮೆ ಸಂತ ರಾಮನ ಪದವ

ಸಂತೋಷ ಮನದಿ ನೆನೆವುತ್ತ

ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ

ಕಾಂತನಿದ್ದೆಡೆಗೆ ನಡೆದಳು ||೬೬||


ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ

ಚೆಂದವಾಗಿದ್ದ ಚೆಲುವನ

ಇಂದಿರೆ ಕಂಡು ಇವನೆ ತನಗೆ ಪತಿ-

ಯೆಂದವನ ಬಳಿಗೆ ನಡೆದಳು ||೬೭||


ಈ ತೆರದ ಸುರರ ಸುತ್ತ ನೋಡುತ ಲಕ್ಷ್ಮೀ

ಚಿತ್ತವ ಕೊಡದೆ ನಸುನಗುತ

ಚಿತ್ತವಕೊಡದೆ ನಸುನಗುತ ಬಂದು ಪುರು-

ಷೋತ್ತಮನ ಕಂಡು ನಮಿಸಿದಳು ||೬೮||


ನಾನಾಕುಸುಮಗಳಿಂದ ಮಾಡಿದ ಮಾಲೆಯ

ಶ್ರೀ ನಾರಿ ತನ್ನ ಕರದಲ್ಲಿ

ಪೀನಕಂಧರದ ತ್ರಿವಿಕ್ರಮರಾಯನ

ಕೊರಳಿನ ಮೇಲಿಟ್ಟು ನಮಿಸಿದಳು ||೬೯||


ಉಟ್ಟಪೊಂಬಟ್ಟೆಯ ತೊಟ್ಟಾಂಭರಣಂಗಳು

ಇಟ್ಟ ನವರತ್ನದ ಮುಕುಟವು

ದುಷ್ಟಮರ್ದನನೆಂಬ ಕಡೆಯ ಪಂಡೆಗಳು

ವಟ್ಟಿದ್ದ ಹರಿಗೆ ವಧುವಾದಳು ||೭೦||


ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು

ತಂಬಟೆ ಭೇರಿ ಪಟಹಗಳು

ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು

ಅಂಬುಧಿಯ ಮನೆಯಲ್ಲೆಸೆದವು ||೭೧||


ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ-

ನರ್ಘ್ಯ ಪೂಜೆಯಿತ್ತನಳಿಯಗೆ

ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು

ಸದ್ಗತಿಯಿತ್ತು ಸಲಹೆಂದ ||೭೨||


ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ-

ಲಾದ ಮುನೀಂದ್ರರು ಮುದದಿಂದ

ವಧೂವರರ ಮೆಲೆ ಶೋಭನದಕ್ಷತೆಯನು

ಮೊದವೀವುತ್ತ ತಳೆದರು ||೭೩||


ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು

ತುಂಬುರು ನಾರದರು ತುತಿಸುತ್ತ

ತುಂಬುರು ನಾರದರು ತುತಿಸುತ್ತ ಪಾಡಿದರು ಪೀ-

ತಾಂಬರಧರನ ಮಹಿಮೆಯ ||೭೪||


ದೇವನಾರಿಯರೆಲ್ಲ ಬಂದೊದಗಿ ಪಾಠಕರು

ಓವಿ ಪಾಡುತ್ತ ಕುಣಿದರು

ದೇವತರುವಿನ ಹೂವಿನ ಮಳೆಗಳ

ಶ್ರೀವರನ ಮೆಲೆ ಕರೆದರು ||೭೫||


ಮುತ್ತು-ರತ್ನಗಳಿಂದ ಕೆತ್ತಿಸಿದ ಹಸೆಯ ನವ-

ರತ್ನ ಮಂಟಪದಿ ಪಸರಿಸಿ

ರತ್ನಮಂಟಪದಿ ಪಸರಿಸಿ ಕೃಷ್ಣನ

ಮುತ್ತೈದೆಯರೆಲ್ಲ ಕರೆದರು ||೭೬||


ಶೇಷಶಯನನೆ ಬಾ ದೋಷದೂರನೆ ಬಾ

ಭಾಸುರಕಾಯ ಹರಿಯೆ ಬಾ

ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-

ಲಾಸದಿಂದೆಮ್ಮ ಹಸೆಗೆ ಬಾ ||೭೭||


ಕಂಜಲೋಚನನೆ ಬಾ ಮಂಜುಳಮೂರ್ತಿ ಬಾ

ಕುಂಜರವರದಾಯಕನೆ ಬಾ

ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-

ರಂಜನ ನಮ್ಮ ಹಸೆಗೆ ಬಾ ||೭೮||


ಆದಿಕಾಲದಲಿ ಆಲದೆಲೆಯ ಮೇಲೆ

ಶ್ರೀದೇವಿಯರೊಡನೆ ಪವಡಿಸಿದ

ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ

ಮೋದದಿಂದೆಮ್ಮ ಹಸೆಗೆ ಬಾ ||೭೯||


ಆದಿಕಾರಣನಾಗಿ ಆಗ ಮಲಗಿದ್ದು

ಮೋದ ಜೀವರ ತನ್ನ ಉದರದಲಿ

ಮೋದ ಜೀವರ ತನ್ನುದರದಲಿ ಇಂಬಿತ್ತ ಅ-

ನಾದಿ ಮೂರುತಿಯೆ ಹಸೆಗೆ ಬಾ ||೮೦||


ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ

ತಿರ್ಮಯವಾದ ಪದ್ಮದಲ್ಲಿ

ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ

ನಮ್ಮ ಮನೆಯ ಹಸೆಗೆ ಬಾ ||೮೧||


ನಾನಾವತಾರದಲಿ ನಂಬಿದ ಸುರರಿಗೆ

ಆನಂದವೀವ ಕರುಣಿ ಬಾ

ಆನಂದವೀವ ಕರುಣಿ ಬಾ ಶ್ರೀಕೃಷ್ಣ

ಶ್ರೀನಾರಿಯೊಡನೆ ಹಸೆಗೆಳು ||೮೨||


ಬೊಮ್ಮನ ಮನೆಯಲ್ಲಿ ರನ್ನದಪೀಠದಿ ಕುಳಿತು

ಒಮ್ಮನದಿ ನೇಹವ ಮಾಡುವ

ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ-

ರಮ್ಮ ಮೂರುತಿಯೆ ಹಸೆಗೆ ಬಾ ||೮೩||


ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿ-

ಕ್ಕೆ ಬಡಿಸಿದ ರಸಾಯನವ

ಸಕ್ಕರೆಗೂಡಿದ ಪಾಯಸ ಸವಿಯುವ

ರಕ್ಕಸವೈರಿಯೆ ಹಸೆಗೆ ಬಾ ||೮೪||


ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು

ಭದ್ರಮಂಟಪದಿ ಕುಳ್ಳಿರಿಸಿ

ಸ್ವಾದ್ವನ್ನಗಳನು ಬಡಿಸಲು ಕೈಗೊಂಡ

ಮುದ್ದು ನರಸಿಂಹ ಹಸೆಗೆ ಬಾ ||೮೫||


ಗರುಡನ ಮೇಲೇರಿ ಗಗನಮಾರ್ಗದಲ್ಲಿ

ತರತರದಿ ಸ್ತುತಿಪ ಸುರಸ್ತ್ರೀಯರ

ಮೆರೆವ ಗಂಧರ್ವರ ಗಾನವ ಸವಿಯುವ

ನರಹರಿ ನಮ್ಮ ಹಸೆಗೆ ಬಾ ||೮೬||


ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ

ಉಮ್ಮೆಯರಸ ನಮಿಸಿದ

ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-

ರಮ್ಮ ಮೂರುತಿಯೆ ಹಸೆಗೆ ಬಾ ||೮೭||


ಇಂದ್ರನ ಮನೆಘೋಗಿ ಅದಿತಿಗೆ ಕುಂಡಲವಿತ್ತು

ಅಂದದ ಪೂಜೆಯ ಕೈಗೊಂಡು

ಅಂದದ ಪೂಜೆಯ ಕೈಗೊಂಡು ಸುರತರುವ

ಇಂದಿರೆಗಿತ್ತ ಹರಿಯೆ ಬಾ ||೮೮||


ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ

ಧರ್ಮರಕ್ಷಕನೆನಿಸುವ

ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ-

ಸ್ಸೀಮ ಮಹಿಮ ಹಸೆಗೆ ಬಾ ||೮೯||


ಮುತ್ತಿನ ಸತ್ತಿಗೆಯ ನವರತ್ನದ ಚಾಮರ

ಸುತ್ತನಲಿವ ಸುರಸ್ತ್ರೀಯರ

ನೃತ್ಯವ ನೋಡುತ ಚಿತ್ರ ವಾದ್ಯಂಗಳ ಸಂ

ಪತ್ತಿನ ಹರಿಯೆ ಹಸೆಗೆ ಬಾ ||೯೦||


ಎನಲು ನಗುತ ಬಂದು ಹಸೆಯ ಮೇಲೆ

ವನಿತೆ ಲಕ್ಷ್ಮಿಯೊಡಗೂಡಿ

ಅನಂತ ವೈಭವದಿ ಕುಳಿತ ಕೃಷ್ಣನ ನಾಲ್ಕು

ದಿನದುತ್ಸವವ ನಡೆಸಿದರು ||೯೧||


ಅತ್ತೆರೆನಿಪ ಗಂಗೆ ಯಮುನೆ ಸರಸ್ವತಿ ಭಾ-

ರತಿ ಮೊದಲಾದ ಸುರಸ್ತ್ರೀಯರು

ಮುತ್ತಿನಾಕ್ಷತೆಯನು ಶೋಭಾನವೆನುತಲಿ ತಮ್ಮ

ಅರ್ತಿಯಳಿಯಗೆ ತಳಿದರು ||೯೨||


ರತ್ನದಾರತಿಗೆ ಸುತ್ತ ಮುತ್ತನೆ ತುಂಬಿ

ಮುತ್ತೈದೆಯರೆಲ್ಲ ಧವಳದ

ಮುತ್ತೆದೆರೆಲ್ಲ ಧವಳದ ಪದವ ಪಾ-

ಡುತ್ತಲೆತ್ತಿದರೆ ಸಿರಿವರಗೆ ||೯೩||


ಬೊಮ್ಮ ತನ್ನರಸಿ ಕೂಡೆ ಬಂದರೆಗಿದ

ಉಮ್ಮೆಯರಸ ನಮಿಸಿದ

ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ

ರಮ್ಮೆಯರಸಗೆ ಸಲಿಸಿದರು ||೯೪||


ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ

ಮುಕ್ತಾಸುರರು ಮುದದಿಂದ

ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ

ಮಸ್ತಕದ ಮಣಿಯ ಶಿವನಿತ್ತ ||೯೫||


ತನ್ನರಸಿ ಕೂಡೆ ಸವಿನುಡಿ ನುಡಿವಾಗ

ವದನದಲ್ಲಿದ್ದಗ್ನಿ ಕೆಡದಂತೆ

ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ

ತನ್ನಾಹುತಿ ದಿಬ್ಬಣ ಸುರರಿಗೆ ||೯೬||


ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ

ಉಬ್ಬಿದ ಹರುಷದಿ ಉಣಿಸಲು

ಉಬ್ಬಿದ ಹುರುಷದಿ ಉಣಿಸಬೇಕೆಂದು ಸಿಂಧು

ಸರ್ವರಿಗಡಿಗೆಯ ಮಾಡಿಸಿದ ||೯೭||


ಮಾವನ ಮನೆಯಲ್ಲಿ ದೇವರಿಗೌತಣವ

ದಾನವರು ಕೆಡಿಸದೆ ಬಿಡರೆಂದು

ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ

ದೇವಸ್ತ್ರೀವೇಷವ ಧರಿಸಿದ ||೯೮||


ತನ್ನ ಸೌಂದರ್ಯದಿಂದುನ್ನತಮಯವಾದ

ಲಾವಣ್ಯದಿಂದ ಮೆರೆವ ನಿಜಪತಿಯ

ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-

ಗನ್ಯರೇಕೆಂದು ಬೆರಗಾದಳು ||೯೯||


ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ

ಭಾವಕಿಯರೆಲ್ಲ ಮರುಳಾಗೆ

ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ

ಸೇವಕ ಸುರರಿಗುಣಿಸಿದ ||೧೦೦||


ನಾಗನ ಮೆಲೆ ತಾ ಮಲಗಿದ್ದಾಗ

ಆಗಲೆ ಜಗವ ಜತನದಿ

ಆಗಲೆ ಜಗವ ಜತನದಿ ಧರಿಸೆಂದು

ನಾಗಬಲಿಯ ನಡೆಸಿದ ||೧೦೧||


ಕ್ಷುಧೆಯ ಕಳೆವ ನವರತ್ನದ ಮಾಲೆಯ

ಮುದದಿಂದ ವಾರಿಧಿ ವಿಧಿಗಿತ್ತ

ಚದುರ ಹಾರವ ವಾಯುದೇವರಿಗಿತ್ತ

ವಿಧುವಿನ ಕಲೆಯ ಶಿವಗಿತ್ತ ||೧೦೨||


ಶಕ್ರ ಮೊದಲಾದ ದಿಕ್ಪಾಲಕರಿಗೆ

ಸೊಕ್ಕಿದ ಚೌದಂತ ಗಜಂಗಳ

ಉಕ್ಕಿದ ಮನದಿಂದ ಕೊಟ್ಟ ವರುಣ ಮದು-

ಮಕ್ಕಳಾಯುಷ್ಯವ ಬೆಳೆಸೆಂದ ||೧೦೩||


ಮತ್ತೆ ದೇವೆಂದ್ರಗೆ ಪಾರಿಜಾತವನಿತ್ತ

ಚಿತ್ತವ ಸೆಳೆವಪ್ಸರಸ್ತ್ರೀಯರ

ಹತ್ತುಸಾವಿರ ಕೊಟ್ಟ ವರುಣದೇವ ಹರಿ-

ಭಕ್ತಿಯ ಮನದಲ್ಲಿ ಬೆಳೆಸೆಂದ ||೧೦೪||


ಪೊಳೆವ ನವರತ್ನದ ರಾಶಿಯ ತೆಗೆತೆಗೆದು

ಉಳಿದ ಅಮರರಿಗೆ ಸಲ್ಲಿಸಿದ

ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ

ಕಳುಹಿದನವರ ಮನೆಗಳಿಗೆ ||೧೦೫||


ಉನ್ನತ ನವರತ್ನಮಯವಾದ ಅರಮನೆಯ

ಚೆನ್ನೆ ಮಗಳಿಗೆ ವಿರಚಿಸಿ

ತನ್ನ ಅಳಿಯನಿಗೆ ಸ್ಥಿರಮಾಡಿ ಕೊಟ್ಟ

ಇನ್ನೊಂದು ಕಡೆಯಡಿ ಇಡದಂತೆ ||೧೦೬||


ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ

ಜಯವಿತ್ತ ಕ್ಷೀರಾಂಬುಧಿಯಲ್ಲಿ

ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ

ದಯದಿ ನಮ್ಮೆಲ್ಲರ ಸಲಹಲಿ ||೧೦೭||


ಈ ಪದವ ಮಾಡಿದ ವಾದಿರಾಜ ಮುನಿಗೆ

ಶ್ರೀಪತಿಯಾದ ಹಯವದನ

ತಾಪವ ಕಳೆದು ತನ್ನ ಶ್ರೀಚರಣವ ಸ

ಮೀಪದಲ್ಲಿಟ್ಟು ಸಲಹಲಿ ||೧೦೮||


ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ

ಕಾಂತನ ಕಂದನೆನಿಸುವ

ಸಂತರ ಮೆಚ್ಚಿನ ವಾದಿರಾಜೇಂದ್ರಮುನಿ

ಪಂಥದಿ ಪೇಳಿದ ಪದವಿದು ||೧೦೯||


ಶ್ರೀಯರಸ ಹಯವದನಪ್ರಿಯ ವಾದಿರಾಜ-

ರಾಯ ರಚಿಸಿದ ಪದವಿದು

ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚಾಗುವದು ನಿ-

ರಾಯಾಸದಿಂದ ಸುಖಿಪರು ||೧೧೦||


ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ

ಕ್ರಮ್ಮದಿ ಮಾಡಿ ವಿನೊದಿಸುವ

ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗು

ಅಸುರ ಮೋಹನವೆ ನರನಟನೆ ||೧೧೧||


ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ

ಮದುಮಕ್ಕಳಿಗೆ ಮುದವಹುದು

ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವದು

ಮದನನಯ್ಯನ ಕೃಪೆಯಿಂದ ||೧೧೨||


ಶೋಭಾನವೆನ್ನಿರೆ ಸುರರೊಳು ಶುಭಗನಿಗೆ

ಶೋಭಾನವೆನ್ನಿ ಸುಗುಣನಿಗೆ

ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ

ಶೋಭಾನವೆನ್ನಿ ಸುರಪ್ರಿಯಗೆ ||ಶೋಭಾನೆ||

********* 

..ಶೋಭಾನವೆನ್ನಿರೆ ಸುರರೊಳು ಸುಭಗನಿಗೆ

ಶೋಭಾನವೆನ್ನಿ ಸುಗುಣನಿಗೆ

ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ

ಶೋಭಾನವೆನ್ನಿ ಸುರಪ್ರಿಯಗೆ ॥ ಶೋಭಾನೆ ॥ ॥ ಪ ॥



ಹಡಗಿನೊಳಗಿಂದ ಬಂದ ಕಡು ಮುದ್ದು ಶ್ರೀಕೃಷ್ಣಗೆ

ಕಡೆಗೋಲು ನೇಣ ಪಿಡಿದನೆ ॥

ಕಡಗೋಲು ನೇಣ ಪಿಡಿದನೆ ದೇವಕಿಯ

ತನಯಗಾರುತಿಯ ಬೆಳಗಿರೆ ॥ ಶೋಭಾನೆ ॥



ಆಚಾರ್ಯರ ಕೈಯಿಂದ ಅಧಿಕಪೂಜೆಯಗೊಂಬ

ಕಾಂತೆ ಲಕ್ಷ್ಮಿಯ ಅರಸನೆ ॥

ಕಾಂತೆ ಲಕ್ಷ್ಮಿಯ ಅರಸನೆ ಶ್ರೀಕೃಷ್ಣಗೆ

ಕಾಂಚನದಾರತಿಯ ಬೆಳಗಿರೆ ॥ ಶೋಭಾನೆ ॥



ಮಧ್ವಸರೋವರದಿ ಶುದ್ಧ ಪೂಜೆಯ ಕೊಂಬ

ಮುದ್ದು ರುಕ್ಮಿಣಿಯರಸನೆ ॥

ಮುದ್ದು ರುಕ್ಮಿಣಿಯ ಅರಸನೆ ಶ್ರೀಕೃಷ್ಣಗೆ

ಮುತ್ತಿನಾರತಿಯ ಬೆಳಗಿರೆ ॥ ಶೋಭಾನೆ ॥



ಪಾಂಡವರ ಪ್ರಿಯನೆ ಚಾಣೂರಮರ್ದನನೆ

ಸತ್ಯಭಾಮೆಯ ಅರಸನೆ ॥

ಸತ್ಯಭಾಮೆಯ ಅರಸನೆ ಶ್ರೀಕೃಷ್ಣಗೆ

ನವರತ್ನದಾರತಿಯ ಬೆಳಗಿರೆ ॥ ಶೋಭಾನೆ ॥



ಸೋದರ ಮಾವನ ಮಧುರೆಲಿ ಮಡುಹಿದ

ತಾಯಿಯ ಸೆರೆಯ ಬಿಡಿಸಿದ ॥

ತಾಯಿಯ ಸೆರೆಯ ಬಿಡಿಸಿದ ಹಯವದನ

ದೇವಗಾರತಿಯ ಬೆಳಗಿರೆ ॥ ಶೋಭಾನೆ ॥



ಮುತ್ತೈದೆಯರೆಲ್ಲರೂ ಮುತ್ತಿನಾರುತಿ ಎತ್ತಿ

ಹತ್ತಾವತಾರದ ಹಯವದನಗ

ಹತ್ತಾವತಾರದ ಹಯವದನ ದೇವಗ

ಹೊಸ ಮುತ್ತಿನಾರುತಿಯ ಬೆಳಗಿರೆ ॥ ಶೋಭಾನೆ ॥

**********



ಭಾನುವಾರ, ಜುಲೈ 19, 2026

Vishwanathashtakam,S.P. Balasubrahmanyam

 



 Kasi Vishwanathashtakam

gaṅgā taraṅga ramaṇīya jaṭā kalāpaṃ
gaurī nirantara vibhūṣita vāma bhāgaṃ
nārāyaṇa priyamanaṅga madāpahāraṃ
vārāṇaśī purapatiṃ bhaja viśvanātham ॥ 1 ॥

vāchāmagōcharamanēka guṇa svarūpaṃ
vāgīśa viṣṇu sura sēvita pāda padmaṃ
vāmēṇa vigraha varēna kalatravantaṃ
vārāṇaśī purapatiṃ bhaja viśvanātham ॥ 2 ॥

bhūtādipaṃ bhujaga bhūṣaṇa bhūṣitāṅgaṃ
vyāghrāñjināṃ baradharaṃ, jaṭilaṃ, trinētraṃ
pāśāṅkuśābhaya varaprada śūlapāṇiṃ
vārāṇaśī purapatiṃ bhaja viśvanātham ॥ 3 ॥

sītāṃśu śōbhita kirīṭa virājamānaṃ
bālēkṣaṇātala viśōṣita pañchabāṇaṃ
nāgādhipā rachita bāsura karṇa pūraṃ
vārāṇaśī purapatiṃ bhaja viśvanātham ॥ 4 ॥

pañchānanaṃ durita matta mataṅgajānāṃ
nāgāntakaṃ dhanuja puṅgava pannāgānāṃ
dāvānalaṃ maraṇa śōka jarāṭavīnāṃ
vārāṇaśī purapatiṃ bhaja viśvanātham ॥ 5 ॥

tējōmayaṃ saguṇa nirguṇamadvitīyaṃ
ānanda kandamaparājita mapramēyaṃ
nāgātmakaṃ sakala niṣkaḻamātma rūpaṃ
vārāṇaśī purapatiṃ bhaja viśvanātham ॥ 6 ॥

āśāṃ vihāya parihṛtya paraśya nindāṃ
pāpē rathiṃ cha sunivārya manassamādhau
ādhāya hṛt-kamala madhya gataṃ parēśaṃ
vārāṇaśī purapatiṃ bhaja viśvanātham ॥ 7 ॥

rāgādhi dōṣa rahitaṃ svajanānurāgaṃ
vairāgya śānti nilayaṃ girijā sahāyaṃ
mādhurya dhairya subhagaṃ garaḻābhirāmaṃ
vārāṇaśī purapatiṃ bhaja viśvanātham ॥ 8 ॥

vārāṇaśī pura patē sthavanaṃ śivasya
vyākhyātaṃ aṣṭakamidaṃ paṭhatē manuṣya
vidyāṃ śriyaṃ vipula saukhyamananta kīrtiṃ
samprāpya dēva nilayē labhatē cha mōkṣam ॥

viśvanāthāṣṭakamidaṃ puṇyaṃ yaḥ paṭhēḥ śiva sannidhau
śivalōkamavāpnōti śivēnasaha mōdatē ॥

ಶುಕ್ರವಾರ, ಜುಲೈ 10, 2026

Eepariya Sobagu -

 


Ee pariya sobagAva dEvarali kANe

gOpijanapriya gOpalagallade


doreyatanadali nODe DharaNidEvige ramaNa

siriyatanadali nODe shrikAntanu

hiriyatanadali nODe sarasijOdBhavanayya

guruvutanadali nODe jagadAdi guruvu


pAvanatvadi nODe amaragangAjanaka

dEvatvadali nODe divijaroDeya

lAvanyadali nODe lOkamohakanayya

Ava dhairyadi nODe asurAntaka


gaganadali sancharipa garuDa dEvane turaga

jagatIdhara shEsha pariyanka shayana

nigamagOchara purandara viTalagallade

migilAda dEvrige Ee bhAgyavunTe


Meaning :


I dont see any other God who has got privileges (qualities) which GopAla, beloved of gopis, has.


If you see in terms of kinship, He is king of the Earth (BhUdEvi)

If you see in terms of wealth, He is husband of Shree (Lakshmi)

If you see in terms of eldership, He is father of Brahma.

If you see in terms of mastership, He is First master of Universe.


If you see in terms of purity, He is Father of Ganga, who is immortal.

If you see in amongst dEvatAs, He is head of all.

If you see in terms of charm, He is loved by all.

If you see in terms of braveness, He is killer of many asuras (rAkshasas).


GaruDa who moves in sky is His chariot

ShEsha who holds the earth is His cot (bed)

Except for Purandara viTala who is seen (or understood) thru Vedas,

who else can have such privileges.


Back

ಗುರುವಾರ, ಮೇ 28, 2026

DEENA NAANU - Vidyabhushana

 



ದೀನ ನಾನು ಸಮಸ್ತ ಲೋಕಕೆ ದಾನಿ ನೀನು

ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು|


ಏನ ಬಲ್ಲೆನು ನಾನು ನೆರೆಸುಜ್ನಾನಮೂರುತಿ ನೀನು

ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮ ಅನವರತ ||

ದೇವ ... ದೇವ.... ದೇವ....


ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ

ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ ಬಾಗಿಲನು ತೆರೆದು


ಪರಮಪದದೊಳಗೆ ವಿಷಧರನ ತಲ್ಪದಲಿ ನೀ

ಸಿರಿಸಹಿತ ಕ್ಷೀರವಾರಿಧಿಯೊಳಿರಲೂ...

ಕರಿರಾಜ ಕಷ್ಟದಲಿ ಆದಿಮೂಲ ಎಂದು

ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಬಾಗಿಲನು ತೆರೆದು


ಕಡುಕೋಪದಿಂ ಖಳನು ಖಡ್ಗವನೆ ಪಿಡಿದು..

ನಿನ್ನೊಡೆಯ ಎಲ್ಲಿಹನು ಎಂದು ನುಡಿಯೇ..

ಧೃಢ ಭಕುತಿಯಲು ಶಿಶುವು ಬಿಡದೆ ನಿನ್ನನು ಭಜಿಸೆ..

ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ ಬಾಗಿಲನು ತೆರೆದು...


ಯಮಸುತನ ರಾಣಿಗೆ ಅಕ್ಷಯವಸನವನಿತ್ತೆ

ಸಮಯದಲಿ ಅಜಮಿಳನ ಪೊರೆದೇ...

ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ

ಕಮಲಾಕ್ಷ ಕಾಗಿನೆಲೆಯಾದಿಕೇಶವನೇ ಬಾಗಿಲನು ತೆರೆದು...


ಬಾಗಿಲನು ತೆರೆದು

ಬಾಗಿಲನು ತೆರೆದು... ಸೇವೆಯನು ಕೊಡೊ ಹರಿಯೇ


ಗುರುವಾರ, ಮೇ 21, 2026

D.D.Aadiyaane Ranga, Vidyabhushana

 




ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು

ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ. || A. PA ||

ಮರಕದ ನವರತ್ನ ವಜ್ರ ಹರಳು ಕೆತ್ತಿಸಿದಾ ಜುಮನಿ ಕಿರಣ ಮುಕುಟ ಧರಿಸಿದ ಶಿರದಲ್ಲೀ

ಸರಿ ಸರಿ ಸರಿ ಸರಿ ಸರಿ ಸರಿದಾಡುತ. ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ || 1 ||

ಚಂದ್ರಶೇಖರ ಹಂಸ ವಾಹನ ಇಂದ್ರಾದ್ಯರ ಆಕಾಶದಲ್ಲಿ ಧುಂ ಧುಂ ಧುಂ ಧುಂ ಧುಂಧುಬಿ ನುಡಿಸೇ

ಬಂದೇ ಇಕೋ ಬಂದೆ ಬಂದೆನುತಾ ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾ ನೆ || 2 ||

ಹಿಂತಿರುಗಿ ಪೋಗಿ ನೀನು ಅಂತರಿಸಿ ದೂರದಲ್ಲಿ ನಿಂತು ವಿಜಯ ವಿಠ್ಠಲ ರಾಯನೂ

ವಿಠ್ಠಲ ರಾಯನು ನಿಂತಿರಿರಿರಿರಿರಿರೀ ಎಂದು ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾ ನೆ|| 3 ||

Ōḍi ōḍi bandu haṇege nīḍi nīne ḍiḍikk ḍiḍikk ḍiḍikk ḍiḍikk endu ḍi ḍī āḍyāne raṅgā ḍi ḍī āḍyāne. || A. PA ||

marakada navaratna vajra haraḷu kettisidā jumani kiraṇa mukuṭa dharisida śiradallī sari sari sari sari sari saridāḍuta. Ḍi ḍī āḍyāne raṅgā ḍi ḍī āḍyāne || 1 ||

candraśēkhara hansa vāhana indrādyara ākāśadalli dhuṁ dhuṁ dhuṁ dhuṁ dhundhubi nuḍisē bandē ikō bande bandenutā ḍi ḍī āḍyāne raṅgā ḍi ḍī āḍyā ne || 2 ||

hintirugi pōgi nīnu antarisi dūradalli nintu vijaya viṭhṭhala rāyanū viṭhṭhala rāyanu nintiriririririrī endu ḍi ḍī āḍyāne raṅgā ḍi ḍī āḍyā ne|| 3 ||

In Plain English

Odi odi bandu hanege nidi nine didikk didikk didikk didikk endu di di adyane ranga di di adyane. || A. PA ||

marakada navaratna vajra haralu kettisida jumani kirana mukuta dharisida siradalli sari sari sari sari sari saridaduta. Di di adyane ranga di di adyane || 1 ||

candrasekhara hansa vahana indradyara akasadalli dhum dhum dhum dhum dhundhubi nudise bande iko bande bandenuta di di adyane ranga di di adya ne || 2 ||

hintirugi pogi ninu antarisi duradalli nintu vijaya viththala rayanu viththala rayanu nintiriririririri endu di di adyane ranga di di adya ne|| 3 ||

ಗುರುವಾರ, ಮೇ 14, 2026

Dasana Maadiko Enna, Vidyabhushan,

 



 

ದಾಸನ ಮಾಡಿಕೊ ಎನ್ನ ಸ್ವಾಮಿ

ಸಾಸಿರನಾಮದ ವೆಂಕಟರಮಣ


ದುರುಬುದ್ಧಿಗಳನೆಲ್ಲ ಬಿಡಿಸೋ

ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ


ಚರಣ ಸೇವೆ ಎನಗೆ ಕೊಡಿಸೋ

ಅಭಯ ಕರಪುಷ್ಪವಾ ಎನ್ನ ಶಿರದಲಿ ಮುಡಿಸೋ


ದೃಢಭಕ್ತಿ ನಿನ್ನಲಿ ಬೇಡಿ

ನಾ ಅಡಿಗೆರಗುವೆನಯ್ಯ ಅನುದಿನ ಪಾಡಿ


ಕಡೆಗಣ್ಣಲೇಕೆನ್ನನೋಡಿ ಬಿಡುವೆ

ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ


ಮೊರೆಹೊಕ್ಕವರ ಕಾವ ಬಿರುದು

ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು


ದುರಿತಗಳೆಲ್ಲವ ತರಿದು

ಸಿರಿ ಪುರಂದರ ವಿಠಲ ಎನ್ನನು ಪೊರೆದು



ಶುಕ್ರವಾರ, ಮೇ 8, 2026

Dayaviralli Damodhara - Vidyabhushana,

 




ದಯವಿರಲಿ ದಾಮೋದರ ।। PA ||
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ ।। A PA ||

ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ
ಸಾಗುವವನಲ್ಲನಾ ನಿನ್ನ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದು
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।। 1 ।।

ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ನಾ ಬಂದವನಲ್ಲ
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ ।। 2 ।।

ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ
ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ ।। 3 ।।

ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು
ಪಾಡಿದೆನೆ ಆರಾರು ಪಾಡದೊಂದು
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು
ಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು ।। 4 ।।

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನ ಬಳಿಗೆ ಇಂದಿರೇಶ
ಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆ
ಬಂಧನ ಬಡಿವ ಭಕುತಿಯು ಜ್ಞಾನ ನೀಡುವುದು ।। 5 ।।

ಬಿನ್ನಪವ ಕೇಳು ಸ್ವಾಮಿ ಎನ್ನನೋಬ್ಬನ್ನೆ ಅಲ್ಲ
ಎನ್ನ ಹೊಂದಿ ನಡೆವ ವೈಷ್ಣವರನ
ಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿ
ಘನಗತಿಗೈದಿಸುವ ಭಕುತಿ ಕೊಡು ಕರುನಾಡಿ ।| 6 ।।

ರಾಜರಾಜೇಶ್ವರ ರಾಜೀವದಳನಯನ
ಮೂಜಗದೊಡೆಯ ಮುಕುಂದಾನಂದ
ಈ ಜೀವಕೀ ದೇಹ ಬಂದದ್ದಕ್ಕು ಎನಗತಿ ನಿ
ರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ ।। 7 ।।

ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರು
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ
ಚಿನುಮಯ ಮೂರುತಿ ಗೋಪಾಲವಿಠಲ
ಘನಕರುಣಿ ಮಧ್ವಮುನಿ ಮನಮಂದಿರನಿವಾಸ ।। 8 ।।

Dayavirali dayavirali dāmōdara || PA ||
sāyavāgi biḍadenna sākuva śrīkr̥ṣṇa || A PA ||

hōgi baruvenayya hōda hāṅgella
sāguvavanallanā ninna biṭṭu
tūgi toṭṭilu konege sthaḷadalli nilluvudu
hyāge nī naḍedante hāge nā naḍakombe || 1 ||

Iddalle ennanud’dharipa śakti a-
sādhyandu ninage nā bandavanalla
nadyādi kṣētramūrtigaḷalli nija jñāna
vr̥d’dha janara huḍuki ninna tiḷiyalu bande || 2 ||

Satata iddalle enna salaho avaroḷagāgi
atiśayavu uṇṭu vibhūtiyalli
gatiyu sādhanake abhivyakta sandarśanadi
smr̥tige viśēṣa mārutiramaṇa ninna |\ 3 ||

Nōḍidene nā ninna nōḍade endendu
pāḍidene ārāru pādadondu
māḍidene arcaneya mīsalādudu ondu
mūḍhamatiyali munde ninde kaimugidu || 4 ||

Bandeno nānilli bahujanmada sukr̥ta-
dinda ninna baḷige indirēśa
ondu mātravu iṭṭu sakalavu arpiside
bandhana baḍiva bhakutiyu jñāna nīḍuvudu |\ 5 ||

Binnapava kēḷu svāmi ennanobbanne alla
enna hondi naḍeva vaiṣṇavarana
innavarige bāho duṣkarmagaḷannu keḍisi
ghanagatigaidisuva bhakuti koḍu karunāḍi || 6 ||

Rājarājēśvara rājīvadaḷanayana
mūjagadoḍeya mukundānanda
ī jīvakī dēha bandaddu enagati ni
rvyājadi suragaṅge snānavanu māḍiso || 7 ||

Enage āvudu olle ellelli pōdaru
kṣaṇa biḍade ninna nōḷpa jñānava koḍo
cinumaya mūruti gōpālaviṭhala
ghanakaruṇi madhvamuni manamandiranivāsa || 8 ||

Dayavirali dayavirali damodara PA ||
sayavagi bidadenna sakuva srikrsna || A PA ||

hogi baruvenayya hoda hangella
saguvavanallana ninna bittu
tugi tottilu konege sthaladalli nilluvudu
hyage ni nadedante hage na nadakombe || 1 ||

Iddalle ennanud’dharipa sakti a-
sadhyandu ninage na bandavanalla
nadyadi ksetramurtigalalli nija jnana
vrd’dha janara huduki ninna tiliyalu bande || 2 ||

Satata iddalle enna salaho avarolagagi
atisayavu untu vibhutiyalli
gatiyu sadhanake abhivyakta sandarsanadi
smrtige visesa marutiramana ninna |\ 3 ||

Nodidene na ninna nodade endendu
padidene araru padadondu
madidene arcaneya misaladudu ondu
mudhamatiyali munde ninde kaimugidu || 4 ||

Bandeno nanilli bahujanmada sukrta-
dinda ninna balige indiresa
ondu matravu ittu sakalavu arpiside
bandhana badiva bhakutiyu jnana niduvudu |\ 5 ||

Binnapava kelu svami ennanobbanne alla
enna hondi nadeva vaisnavarana
innavarige baho duskarmagalannu kedisi
ghanagatigaidisuva bhakuti kodu karunadi || 6 ||

Rajarajesvara rajivadalanayana
mujagadodeya mukundananda
i jivaki deha bandaddu enagati ni
rvyajadi suragange snanavanu madiso || 7 ||

Enage avudu olle ellelli podaru
ksana bidade ninna nolpa jnanava kodo
cinumaya muruti gopalavithala
ghanakaruni madhvamuni manamandiranivasa || 8 ||







ಸೋಮವಾರ, ಏಪ್ರಿಲ್ 20, 2026

ಡಂಗುರವ ಸಾರಿ ಹರಿಯ -Dangurava sari hariya - Vidyabhushana

ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ
ಮಂಡಲಕ್ಕೆ ಪಾಂಡುರಂಗವಿಠಲನೆ ಪರದೈವವೆಂದು ।।ಪ।।

ಹರಿಯು ಮುಡಿದ ಹೂವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ ।।೧।।

ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ ।।೨।।

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀ ಪುರಂದರವಿಠಲ ಪರದೈವವೆಂದು ।।೩।।

Dangurava sari hariya Dingarigarellaru
Mandalakke panduranga vithala paradaivavemdu |pa|

Hariyu mudida huvu harivanadolittukondu
Harushadindadi padi kunidu cappalikkuta ||1||

Odala jagateya madi nudiva naligeya pididu
Bidade dhanar- dhanar endu badidu cappalikkuta |2|

Intu sakala lokake lakshmikantanilladillavendu
Santatam Bajisuta meccida purandara vithalanendu |3|


ಬುಧವಾರ, ಏಪ್ರಿಲ್ 15, 2026

ದಾಸರೆಂದರೆ ಪುರಂದರದಾಸರಯ್ಯ - Dasarendare Purandara Dasaraya - Vdyabhushana,

A







ದಾಸರೆಂದರೆ ಪುರಂದರದಾಸರಯ್ಯ || pa ||
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ || a pa ||

ಗ್ರಾಸಕಿಲ್ಲದೇ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದು ತುಲಸಿ ಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ
ಕಾಸುಗಳಿಸುವ ಪುರುಷನವ ಹರಿದಾಸನೇ || 1 ||

ಡಂಭಕದಿ ಹರಿಸ್ಮರಣೆ ಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವ ಪಿತನ ಆಗಮಗಳರಿಯದೆಲೆ
ತಂಬೂರಿ ಮೀಟಲವ ಹರಿದಾಸನೇ || 2 ||

ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನೊಂದು ಕೊಡದ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿ ದಾಸನೇನೈಯ || 3 ||

ಪಾಠಕನ ತೆರೆದಲ್ಲಿ ಪದಗಳನೆ ತಾ ಬೊಗಳಿ
ಕೂಟ ಜನರಾ ಮನವ ಸಂತೋಷಪಡಿಸಿ
ಗೂಟ ನಾಮಗಳಿಟ್ಟು ಕೊಟ್ಟರಿಯೇ ತಾನೆನುತ
ತೂಟಕವ ಮಾಡಲವ ಹರಿದಾಸನೇನೈಯ || 4 ||

ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತ
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರ ದಾಸರಿವರೈಯ || 5 ||

Dāsarendare purandaradāsarayya || pa ||

vāsudēva kr̥ṣṇanna sūsi pūjisuva || ondu pa ||

grāsakilladē pōgi parara manegaḷa pokku
dāsanendu tulasi māle dharisi
bēsaravilladē avara kāḍi bēḍi baḷalisuta
kāsugaḷisuva puruṣanava haridāsanē || 1 ||

ḍambhakadi harismaraṇe māḍi janara munde
sambhramadi tānumba ūṭa bayasi
ambujōdbhava pitana āgamagaḷariyadele
tambūri mīṭalava haridāsanē || 2 ||

yāyavārava māḍi viprarige mr̥ṣṭānna
prīyadali tānondu koḍada lōbhi
māya sansāradali mamate heccāgiṭṭu
gāyanava māḍalava hari dāsanēnaya || 3 ||

pāṭhakana tereyalli padagaḷane tā bogaḷi
kūṭa janara manava santōṣapaḍisi
gūṭa nāmagaḷiṭṭu koṭṭariyē tānenuta
tūṭakava māḍalava haridāsanēnaya || 4 ||

nītiyellavanaritu nigamavēdyana nitya
vātasutanallihana varṇisuta
gīta nartanadinda kr̥ṣṇanna pūjisuva
pūtātma purandara dāsarivarāya || 5 ||

Dasarendare purandaradasarayya || pa ||

vasudeva krsnanna susi pujisuva || ondu pa ||

grasakillade pogi parara manegala pokku
dasanendu tulasi male dharisi
besaravillade avara kadi bedi balalisuta
kasugalisuva purusanava haridasane || 1 ||

dambhakadi harismarane madi janara munde
sambhramadi tanumba uta bayasi
ambujodbhava pitana agamagalariyadele
tamburi mitalava haridasane || 2 ||

yayavarava madi viprarige mrstanna
priyadali tanondu kodada lobhi
maya sansaradali mamate heccagittu
gayanava madalava hari dasanenaya || 3 ||

pathakana tereyalli padagalane ta bogali
kuta janara manava santosapadisi
guta namagalittu kottariye tanenuta
tutakava madalava haridasanenaya || 4 ||

nitiyellavanaritu nigamavedyana nitya
vatasutanallihana varnisuta
gita nartanadinda krsnanna pujisuva
putatma purandara dasarivaraya || 5 ||


ಭಾನುವಾರ, ಮಾರ್ಚ್ 22, 2026

Bhakuthi Sukhavo · Vidyabhushana


ಭಕುತಿ ಸುಖವೊ ರಂಗ ಮುಕುತಿ ಸುಖವೊ || PA ||


ಭಕುತಿ ಸುಖವೊ ಮುಕುತಿ ಸುಖವೊ,

ಯುಕುತಿವಂತರೆಲ್ಲ ಹೇಳಿ || A PA ||


ಭಕುತಿ ಮಾಡಿದ ಪ್ರಹ್ಲಾದ |

ಮುಕುತಿಯನ್ನು ಪಡೆದುಕೊಂಡ |

ಮುಕುತಿ ಬೇಡಿದ ಧ್ರುವರಾಯ |

ಭಕುತಿಯಿಂದ ಹರಿಯ ಕಂಡ || 1||


ಭಕುತಿ ಮಾಡಿದ ಅಜಮಿಳನು |

ಅಂತ್ಯದಲಿ ಹರಿಯ ಕಂಡ |

ಮುಕುತಿಯನು ಬೇಡಿದ ಕರಿರಾಜ |

ದುರಿತಗಳನು ಕಳೆದುಕೊಂಡ || 2 ||


ಭಕುತಿ ಮುಕುತಿದಾತ ನಮ್ಮ |

ಲಕುಮಿಯರಸ ವಿಜಯವಿಠಲ ||

ಶಕುತನೆನುತ ತಿಳಿದು ನಿತ್ಯ |

ಭಕುತಿಯಿಂದ ಭಜನೆ ಮಾಡಿರೊ || 3 ||


Bhakuti sukhavo ranga mukuti sukhavo || PA ||


bhakuti sukhavo mukuti sukhavo, yukutivantarella heli || A PA ||


bhakuti madida prahlada | mukutiyannu padedukonda |


mukuti bedida dhruvaraya | bhakutiyinda hariya kanda || 1||


bhakuti madida ajamilanu | antyadali hariya kanda |


mukutiyanu bedida kariraja | duritagalanu kaledukonda || 2 ||


bhakuti mukutidata nam’ma | lakumiyarasa vijayavithala ||


sakutanenuta tilidu nitya | bhakutiyinda bhajane madiro || 3 ||

ಭಾನುವಾರ, ಮಾರ್ಚ್ 15, 2026

ಬ್ರಹ್ಮಾಂಡದೊಳಗೆ ಅರಸಿ ನೋಡಲು - brahmandadolage arasi nodalu - Vidyabhushana





ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ|| PA ||

ರಮ್ಮೆಯರಸನು ಸರ್ವದಾ ವಾಸಿಪ, ಸುಮ್ಮಾನದಿ ತಾನು || A PA ||

ಜನನ ಮರಣವಿಲ್ಲ, ಉಣುವ ದುಃಖವಿಲ್ಲ
ಅನುಜ ತನುಜರು ಅಲ್ಲಿಲ್ಲ, ಅನುಮಾನದ ಸೊಲ್ಲೇ ..ಇಲ್ಲ || 1 ||

ನಿದ್ರೆಯು ಅಲ್ಲಿಲ್ಲ, ರೋಗೋ-ಪದ್ರಗಳಿಲ್ಲ
ಕ್ಷುದ್ರಜನಂಗಳು ಅಲ್ಲಿಲ್ಲ, ಸ-ಮುದ್ರಶಯನ ಬಲ್ಲ ..ಎಲ್ಲ || 2 ||

ಸಾಧು ಜನರ ಕೂಡೆ, ಮೋಕ್ಷಕೆ, ಸಾಧನೆ ಮಾಡೆ
ಮಾಧವ ಪುರಂದರವಿಟ್ಠಲರಾಯನ, ಆದರಿಸುವನೆಲ್ಲ….ಬಲ್ಲ || 3 ||

brahmandadolage arasi nodalu, nam’mure vasi|| PA ||

ram’meyarasanu sarvada vasipa, sum’manadi tanu || A PA ||

janana maranavilla, unuva duhkhavilla
anuja tanujaru allilla, anumanada solle..Illa || 1 ||

nidreyu allilla, rogo-padragalilla
ksudrajanangalu allilla, sa-mudrasayana balla..Ella || 2 ||

sadhu janara kude, moksake, sadhane made
madhava purandaravitthalarayana, adarisuvanella….Balla || 3 ||




ಶುಕ್ರವಾರ, ಮಾರ್ಚ್ 13, 2026

ಭೂಷಣಕೆ ಭೂಷಣ ಇದು ಭೂಷಣ - Bhushanakke Bhushana Idu · Vidyabhushana

  




ಭೂಷಣಕೆ ಭೂಷಣ ಇದು ಭೂಷಣ

ಶೇಷಾದ್ರಿವಾಸ ಶ್ರೀ ವರವೇಂಕಟೇಶ ।ಪ।


ನಾಲಿಗೆಗೆ ಭೂಷಣ ನಾರಾಯಣ ನಾಮ

ಕಾಲಿಗೆ ಭೂಷಣ ಹರಿಯಾತ್ರೆಯು

ಆಲಯಕೆ ಭೂಷಣ ತುಲಸಿ  ವೃಂದಾವನ

ಕರ್ಣಕೆ  ಭೂಷಣ ವಿಷ್ಣು ಕಥೆಯು

ವಿಶಾಲ ಕರ್ಣಕೆ  ಭೂಷಣ ವಿಷ್ಣು ಕಥೆಯು ।೧।


ದಾನವೇ ಭೂಷಣ ಎರೆಡು  ಹಸ್ತಂಗಳಿಗೆ

ಮಾನವೇ ಭೂಷಣ ಮನುಜರಿಗೆ

ಜ್ಞಾನವೇ ಭೂಷಣ ಮುನಿ-ಯೋಗಿವರ್ಯರಿಗೆ

ಮಾನಿನಿಗೆ ಭೂಷಣ ಪತಿ ಭಕ್ತಿಯು ।೨।


ರಂಗನ್ನ  ನೋಡುವುದು ಕಂಗಳಿಗೆ ಭೂಷಣ

ಮಂಗಳಾಂಗಗೆ  ಮಣಿವ ಶಿರ ಭೂಷಣ

ಶೃಂಗಾರ ತುಳಸಿಮಣಿ ಕೊರಳಿಗೆ ಭೂಷಣ

ರಂಗ ವಿಠಲನ ನಾಮ ಅತಿ ಭೂಷಣ ।೩।


Lyrics in English


Bhushanake bhushana edu bhushana sheshadrivaasa sri vara venkatesha ||pa||


Naligege bhushana narayana naama kaalige bhushana hariyaatreyu | aalayake bhushana tulasi vrundavana karnake bhushana vishnu katheyu vishala karnake bhushana vishnu katheyu


Danave bhushana eredu hastangalige maanave bhushana manujarige | jnanave bhushana muni yogivaryarige maninige bhushana pati bhaktiyu 


Ranganna noduvudu kangalige bhushana | mangalangage maniva shira bhushana | shrungaara tulasimani koralige bhushana ranga vittalana naama ati bhushana



ಸೋಮವಾರ, ಮಾರ್ಚ್ 2, 2026

ಭಾರವೇ ಭಾರತಿ ರಮಣ|| bharave bharati ramana


<

ಭಾರವೇ ಭಾರತಿ ರಮಣ|| bharave bharati ramana
ಭಾರವೇ ಭಾರತಿ ರಮಣ||
ನಿನಗೆ ನಾ ಭಾರವೇ ಭಾರತೀ ರಮಣ||pa||
ಲಂಕಾನಾಥನ ಬಿಂಕವ ಮುರಿದು
ಅಕಳಂಕ ಚರಿತನ ಕಿಂಕರನೆನಿಸಿದೆ||ಲಂಕಾನಾಥನ||
ಪಂಕಜಾಕ್ಷಿಗೆ ಅಂಕಿತದುಂಗುರ ಕೊಟ್ಟು||
ಶಂಕೆಯಿಲ್ಲದೆ ಲಂಕೆಯ ದಹಿಸಿದೆ ||ಭಾರವೇ||
ಸೋಮಕುಲದಿ ನಿಸ್ಸೀಮ ಮಹಿಮನೆನಿಸಿ
ತಾಮಸ ಬಕನ ನಿರ್ಧೂಮ ಮಾಡಿದೆ||ಸೋಮಕುಲದಿ||
ಕಾಮಿನಿ ಮೋಹಿಸೆ ಪ್ರೇಮದಿ ಸಲಹಿದೆ||
ತಾಮರಸಾಖ್ಯನ ಸೇವೆಯ ಮಾಡಿದೆ ||ಭಾರವೇ||
ವೇದವ್ಯಾಸರ ಪೂಜೆಯ ಮಾಡಿ
ಮೋದದಿಂದ ಬಹುವಾದಗಳಾಡಿ||ವೇದವ್ಯಾಸರ||
ಅಧಮ ಶಾಸ್ತ್ರಗಳ ಹೋಮವ ಮಾಡಿ||
ವಿಜಯವಿಠ್ಠಲನ ಸೇವಕನೆನಿಸಿದೆ ||ಭಾರವೇ||

BAravE BArati ramaNa||
ninage nA BAravE BAratI ramaNa||pa||

laMkAnAthana biMkava muridu
akaLaMka caritana kiMkaraneniside||laMkAnAthana||
paMkajAkShige aMkitaduMgura koTTu||
SaMkeyillade laMkeya dahiside ||BAravE||

sOmakuladi nissIma mahimanenisi
tAmasa bakana nirdhUma mADide||sOmakuladi||
kAmini mOhise prEmadi salahide||
tAmarasAKyana sEveya mADide ||BAravE||

vEdavyAsara pUjeya mADi
mOdadiMda bahuvAdagaLADi||vEdavyAsara||
adhama SAstragaLa hOmava mADi||
vijayaviThThalana sEvakaneniside ||BAravE||

 



ಶನಿವಾರ, ಫೆಬ್ರವರಿ 21, 2026

Baayi Naarida Mele - Vidyabhushana,


ಬಾಯಿ ನಾರಿದ ಮೇಲೆ ಏಕಾಂತವೆ
ತಾಯಿ ತೀರಿದ ಮೇಲೆ ತವರಾಸೆಯೆ                         ।।ಪ॥

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣಗುಂದಿದ ಮೇಲೆ ಬಹುಮಾನವೆ
ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ                    ।।೧।।

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣ ಬಹುದೆ
ಚಳಿಯುರಿಗೆ ಚಂದನದ ಲೇಪ ಹಿತವೆ
ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆಬಿದ್ದ ಸರಕಿನೊಳು ಲಾಭವುಂಟೆ                          ।।೨।।

ಪಥ್ಯ ಸೇರದ ಮೇಲೆ ನಿತ್ಯಸುಖವೆನಬಹುದೆ
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ
ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೆ?                            ।।೩।।

Bayi narida mele ekantave
Tayi tirida mele tavaraseye ||pa||

Kannu ketta mele kadurupa celvikeye
Bannagundida mele bahumanave
Punyatirida mele paraloka sadhanave
Sunnavillada vilyavadu svadumayave ||1||

Kilubina battalolu huli kalasi una bahude
Caliyurige chandanada lepa hitave
Molebidda henninolu mohakke sogasahude
Belebidda sarakinolu labavunte ||2||

Pathya serada mele nityasukavenabahude
Sattva taggida mele samarthyave
Pruthviyolu kagineleyadikesava ninna
Baktiyillada narage muktiyunte? ||3||